Announcement
🌸 ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ “ಮುದ್ದು ಕೃಷ್ಣ ಸ್ಪರ್ಧೆ – 2026” 🌸
ಪುಟ್ಟ ಹೆಜ್ಜೆಗಳಲ್ಲಿ ಕೃಷ್ಣನ ಸೊಬಗು… 💙
ಮುಗ್ಧ ನಗುವಿನಲ್ಲಿ ಗೋಕುಲದ ಸಂಭ್ರಮ… 🦚✨
ಸುಜ್ಞಾನ ಎಜುಕೇಷನಲ್ ಟ್ರಸ್ಟ್, ಕುಂದಾಪುರದ ವತಿಯಿಂದ ಪುಟಾಣಿ ಮಕ್ಕಳಿಗಾಗಿ ಆಯೋಜಿಸಿರುವ “ಮುದ್ದು ಕೃಷ್ಣ ಸ್ಪರ್ಧೆ”*ಗೆ ನಿಮ್ಮ ಮುದ್ದು ಕಂದಮ್ಮಗಳನ್ನು ಸಿಂಗರಿಸಿ, ಸಂಭ್ರಮದಿಂದ ಭಾಗವಹಿಸಿ. 🙏
06 ಸೆಪ್ಟೆಂಬರ್ 2026, ಭಾನುವಾರ
⏰ ಬೆಳಿಗ್ಗೆ 9:00ರಿಂದ
🏆 ಆಕರ್ಷಕ ನಗದು ಬಹುಮಾನಗಳು ಹಾಗೂ ಪ್ರಮಾಣಪತ್ರಗಳು
📌 ನೋಂದಣಿ ವಿಧಾನ:
ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಮಗುವಿನ ಹೆಸರು, ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣಪತ್ರ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಕಳುಹಿಸಿ. ವಿವರಗಳನ್ನು ಕಳುಹಿಸಿದ ನಂತರ ನೋಂದಣಿ ಲಿಂಕ್ ಕಳುಹಿಸಲಾಗುವುದು.
📱 ನೋಂದಾಯಿಸಲು ಸಂಪರ್ಕಿಸಿ:
8867853401 / 8088126101
ಬನ್ನಿ… ಪುಟಾಣಿ ಕೃಷ್ಣರ ಮುಗ್ಧ ನಗು ಮತ್ತು ಬಾಲಲೀಲೆಗಳೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮಿಸೋಣ! 💙🦚
ಸುಜ್ಞಾನ ಎಜುಕೇಷನಲ್ ಟ್ರಸ್ಟ್, ಕುಂದಾಪುರ
ಬಂಧುಗಳೆ,
ವಿದ್ಯಾರ್ಥಿ-ಯುವಜನರಲ್ಲಿ ಕುಂದಾಪ್ರ ಕನ್ನಡ ಭಾಷಾ ಪ್ರೀತಿಯನ್ನು ಉದ್ದೀಪಿಸುವ ಮತ್ತು ಈ ಭಾಷೆಯ ಜೊತೆಗೆ ಬೆಸೆದುಕೊಂಡಿರುವ ಸಾಂಸ್ಕೃತಿಕ ಅನನ್ಯತೆಯನ್ನು ಅವರ ಮೂಲಕವೇ ಅನಾವರಣಗೊಳಿಸುವರೆ ವೇದಿಕೆ ಒದಗಿಸುವ ಒಂದು ಪ್ರಯತ್ನ ಯಡಾಡಿ-ಮತ್ಯಾಡಿಯ ಸುಜ್ಞಾನ ಶಿಕ್ಷಣ ಸಂಸ್ಥೆಯ ಸಮುಚ್ಛಯದಲ್ಲಿ ಸಾಕಾರಗೊಳ್ಳಲಿದೆ:ಇದೇ ಜುಲೈ 06, ಸೋಮವಾರ ಬೆಳಿಗ್ಗೆ 9:30ರಿಂದ.ಈ ಸಂತಸದಲ್ಲಿ ನೀವೂ ಜೊತೆಗಿರಬೇಕು ಎನ್ನುವ ಒತ್ತಾಸೆ ನಮ್ಮದು.
ದಯಮಾಡಿ ಬನ್ನಿ.
#ವಾಲ್ಬೆಲ್ಲ #ಕುಂದಾಪ್ರಕನ್ನಡ #ಸುಜ್ಞಾನ #ಮಂಗಳೂರು_ವಿವಿ #ಕುಂದಾಪುರ
ಬಂಧುಗಳೆ,
ಕುಂದಾಪ್ರ ಕನ್ನಡ ಮಾತನಾಡುವ ಬೈಂದೂರು, ಕುಂದಾಪುರ, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕಿನ ಪಿಯುಸಿ ಹಾಗೂ ಹೈಸ್ಕೂಲು ವಿದ್ಯಾರ್ಥಿಗಳಿಗೆ
ಕುಂದಾಪ್ರ ನೆಲಮೂಲದ ಜನಜೀವನ ಆಧಾರಿತ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ: “ವಾಲ್ಬೆಲ್ಲ” ಆಯೋಜಿಸಲಾಗಿದೆ.
ಸ್ಪರ್ಧೆಯ ವಿವರಗಳು ಪೋಸ್ಟರ್‌ನಲ್ಲಿವೆ.
ಇದನ್ನು ನಿಮ್ಮೂರ ಶಾಲೆ, ಕಾಲೇಜು ಹಾಗೂ ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳಿಗೆ ತಲುಪಿಸುವುದರೊಂದಿಗೆ ಅವರ ಪ್ರತಿಭೆಗೆ ಮನ್ನಣೆ ದೊರಕುವಂತೆ ಸಹಕರಿಸಿ.
ಜೊತೆಗೆ ಈ ಕಾರ್ಯಕ್ರಮಕ್ಕೆ ನೀವು ಖುದ್ದು ಬನ್ನಿ.
#ವಾಲ್ಬೆಲ್ಲ #ಕುಂದಾಪ್ರಕನ್ನಡ #KundapuraKannada #ಬೈಂದೂರು #ಕುಂದಾಪುರ #ಬ್ರಹ್ಮಾವರ #ಹೆಬ್ರಿ #ಸಾಂಸ್ಕೃತಿಕ_ಸ್ಪರ್ಧೆ #ಚಿತ್ರಕಲಾ_ಸ್ಪರ್ಧೆ #ವಿದ್ಯಾರ್ಥಿ_ಪ್ರತಿಭೆ #ನೆಲಮೂಲ_ಸಂಸ್ಕೃತಿ #ತುಳುನಾಡು #Karnataka #PUC #HighSchool #Sujnana #ಮಂಗಳೂರು_ವಿವಿ